ಕೊಹ್ಲಿ ಹಾಗು‌ ಕುರ.(ನ್)

ದಿನ ಬೆಳಿಗ್ಗೆ ಎದ್ರೆ ಅದೇ ಜ್ಯೋತಿಷ್ಯ, ಸಮ್ಮಿಶ್ರ ಸರ್ಕಾರಾದ್ ಗೋಳ್ ನ್ಯೂಸ್. ಈ ಮಧ್ಯ ಯಾವ್ದಾದ್ರೂ ಹುಡ್ಗಿ ಕಣ್ಣ್ ಹೊಡುದ್ರೆ ಅದು ಇನ್ನೊಂದ್ ವಾರ ಬ್ರೇಕಿಂಗ್ ನ್ಯೂಸ್. ಕಾರ್ ಇಳ್ದು ಕಿಕಿ ಚ್ಯಾಲೆಂಜ್ ಮಾಡ್ತಾರಂತೆ ಆದ್ರೆ ಪಕ್ಕದಲ್ ಇರೋ ಅಂಗ್ಡಿ ಗ್ ಹೋಗಿ ಸಾಮಾನ್ ತರಕ್ ಟೈಮ್ ಇಲ್ಲ.

ಇವ್ಗಲ್ ಎಲ್ಲದ್ರ್ ನಡ್ವೆ ನಮ್ ಕನ್ನಡಿಗ್ರ್ಗೆ ಎಲ್ಲ್ ಸಿಗುತ್ತೆ ಕ್ರಿಕೆಟ್ ನ್ಯೂಸ್. ಅದಿಕ್ಕೆ ನಿಮ್ಮುಂದೆ ತರ್ತಿದೀನಿ ಇದೊಂದು ಚಿಕ್ಕ ಕನ್ನಡ ಕ್ರಿಕೆಟ್ ಬ್ಲಾಗ್.

ಒಳ್ಳೆ rank ತೆಗ್ದು, ಕೆಟೆಗರೀ ಇಲ್ದೆ, ಬೇಕಾಗಿದ್ ಕಾಲೇಜ್ ಸಿಗ್ಲಿಲ್ಲ ಅಂದ್ರೇ ಉರ್ದೋಗುತ್ತೆ, 5-6 ಅಲಾರ್ಮ್ ಇಟ್ಟು ಬಸ್ ಸ್ಟ್ಯಾಂಡ್ ತನಕ ಓಡ್ ಹೋಗಿ ಇನ್ನೇನ್ ಬಸ್ ಸಿಗ್ತು ಅನ್ನೋ ಅಷ್ಟ್ರಲ್ಲಿ ಬಸ್ ಮೂವ್ ಆಗ್ಬುಟ್ರೇನೇ ಅಷ್ಟ್ ಉರ್ದೋಗುತ್ತೆ, ಇನ್ನೂ 10 ವಿಕೆಟ್ ಇಟ್ಕೊಂಡು 2 ದಿನ ಟೈಮ್ ಇದ್ದು ಕೂಡ 31 ರನ್ ಇಂದ ಸೋತ್ರೆ ಇನ್ ಎಷ್ಟ್ ಉರಿಬೇಡ.?!!

ಈ ಟೆಸ್ಟ್ ಶುರು ಆಗಾಕಿಂತ ಮುಂಚೆ ಎಲ್ಲರ್‌ನು ಕರ್ಸಿ ಹೇಳ್ಬೇಕಿತ್ತು. ನೋಡ್ ಗುರು, ಈ ಟೆಸ್ಟ್ ಬರಿ ವಿರಾಟ್ ಕೊಹ್ಲಿಗಲ್ಲ. ಅವ್ನೊಬ್ಬ ಕೂತ್ಕೊಂಡ್ ಬರಿಯೋ ಟೆಸ್ಟ್ ಅಲ್ಲ. ಇದು ಎಲ್ಲ ಸೇರ್ಕೊಂಡು ಆಡೋ ಟೆಸ್ಟು ಅಂತ. ಅವ್ನ್ ಬಿಟ್ಟು ಒಬ್ರು ಆಡ್ಲಿಲ್ಲ ಮನಸ್ ಕೊಟ್ಟು.

ಈ ಟೆಸ್ಟ್ ಯಾಕಪ್ಪಾ ಇಂಪಾರ್ಟೆಂಟ್ ಆಂದ್ರೇ,

ಮೊದಲ್ನೇ ದಾಗಿ ಇದು ಇಂಗ್ಲೆಂಡ್ ಅವ್ರ್ದು 1000ನೇ ಟೆಸ್ಟ್. ನಮ್ ಅಪ್ರಾಣೆಗೂ ಅವ್ರ್ ಇಷ್ಟ್ ಟೆಸ್ಟ್ ಆಡವ್ರೆ ಅಂತ ಗೊತ್ತಿರ್ಲಿಲ್ಲ.

ಎರ್ಡ್ನೇ ದಾಗಿ ಕೊಹ್ಲಿ ಇಂಗ್ಲೆಂಡ್ ಗೆ 2014 ಅಲ್ ಬಂದಿದಾಗ ಸ್ಲಿಪ್ ಅಲ್ ಇರೋರ್ಗೆ ಮತ್ತೆ ವಿಕೆಟ್ ಕೀಪರ್ ಗೆ ಆ ರಾಹುಲ್ ಡಿಟೋ ರ್ಯಾಪರ್ ಥರ ತಗೋ ತಗೋ ಅಂತ ಕ್ಯಾಚ್ ಕೊಡ್ತಾ ಇದ್ದ. ಆಫ್ ಸ್ಟಂಪ್ ಹತ್ರ ಬಾಲ್ ಬಂದ್ರೆ ರವಿಮಾಮ ತರ ಮುತ್ತ್ ಕೊಡಾಕ್ ಹೋಗ್ತಿದ್ದ.

ಅದಿಕ್ಕೆ ಈ ಸಲ ಹೆಂಗ್ ಆಗಿತ್ತು ಅಂದ್ರೇ ಕೊಹ್ಲಿ ಬೆಸ್ಟ್ ಬ್ಯಾಟ್ಸ್ಮನ್ ಅಂತ ಪ್ರೂವ್ ಮಾಡ್ಬೇಕು ಅಂದ್ರೇ ಇಂಗ್ಲೆಂಡ್ ಅಲ್ ಸೆಂಚುರೀಸ್ ಹೊಡಿಬೇಕು ಅಂತ.

ಹಾಗಾಗಿ ಈ ಟೆಸ್ಟ್ ಗೆ ಸಿಕ್ಕಾಪಟ್ಟೆ ಬಿಲ್ಡ್ ಅಪ್.

ಮ್ಯಾಚ್ ಗಿಂತ ಮುಂಚೆ ಏನ್ ಸೀನ್ಸ್ ಇತ್ತು ಅಂದ್ರೇ,
ಓಪನರ್ಸ್ ಯಾರು ಇಂಡಿಯಾ ಗೆ ಅಂತ. ರಾಹುಲ್, ಧವನ್ ಮತ್ತು ವಿಜಯ್ ಮಧ್ಯ ಯಾರು ಉತ್ತಮರು?. ಕೊಹ್ಲಿ ಗೆ ಮಲ್ಟಿಪಲ್ ಚಾಯ್ಸ್ ಕ್ವೆಸ್ಚನ್ ಪೇಪರ್ ಅಟೆಂಡ್ ಮಾಡಿ ಅಭ್ಯಾಸ ಇಲ್ಲ. ಅವ್ನ್ ಜೈ ಅಂತ ಮೂರ ಜನ್ರನ್ನು ಆಡ್ಸ್ದ.
ಅಕ್ಕ ಬೇಕಾ ತಂಗಿ ಬೇಕಾ ಅಂದ್ರೇ, ಇಬ್ರೂ ಬೇಕು ಅನ್ನೋ ಜಾಯ್‌ಮಾನ ಅವ್ನದು.

ಟಾಸ್ ಸೋತಾಗ್ಲೇ ಮ್ಯಾಚ್ ಸೊಲ್ಪ ಅವ್ರ್ ಕಡೆ ವಾಲ್ಕೊಂತು. ಯಾಕಂದ್ರೆ ಇಂಡಿಯಾ 4ತ್ ಇನ್ನಿಂಗ್ಸ್ ಬ್ಯಾಟಿಂಗ್ ಮಾಡ್ಬೇಕು ಮತ್ತು ನಮ್ಮವ್ರು ಏಶಿಯಾ ಇಂದ ಹೊರ್ಗಡೆ 100 ಕಿಂತ ಜಾಸ್ತಿ 4ನೇ ಇನ್ನಿಂಗ್ಸ್ ಅಲ್ಲಿ ಚೇಸ್ ಮಾಡಿರೋದು 2003 ಅಲ್ಲಿ. ತುಂಬಾ ಹಳೇ ವಿಷ್ಯ. ಆವಾಗ ನಾನು 3ನೇ ಕ್ಲಾಸ್.

ಕುಕ್ ಜೆನ್ನಿಂಗ್ಸ್ ಬ್ಯಾಟಿಂಗ್ ಬಂದ್ರು. ವಿರಾಟ್ ಕೊಹ್ಲಿ ಸುಮ್ನೆ ಫಾರ್‌ಮ್ಯಾಲಿಟೀ ಗೆ ಒಂದಷ್ಟ್ ಫಾಸ್ಟ್ ಬೌಲಿಂಗ್ ಮಾಡ್ಸ್ದ. ಆಮೇಲೆ ಧೋನಿ ಕೊಟ್ಟಿದ್ ಚೀಟಿ ತೆಗ್ದ ಜೇಬಿಂದ, ಧೋನಿ ಬರ್ದಿದ್ದ, ನೋಡ್ ಗುರು, ಲೆಫ್ಟ್ ಹ್ಯಾಂಡೆಡ್ ಬ್ಯಾಟ್ಸ್ಮನ್ ಅಂದ್ರೇ ಅಶ್ವಿನ್ ಗೆ ರಾಗಿ ಮುದ್ದೆ ಇದ್ದಂಗೆ. ಆಫ್ ಸ್ಪಿನ್ ಹಾಕಿ ಗುಳುಂ ಅಂತ ನುಂಗ್ಬಿಡ್ತಾನೆ ಅಂತ. ಅಶ್ವಿನ್ ಅದೇ ಮಾಡ್ದ, ಕುಕ್ ನಮ್ನೆಲ್ಲ ಕೂಕ್ತಾನೆ ಇಡೀ ದಿನ ಅಂದ್ರೇ ಬೌಲ್ಡ್ ಆಗ್ಬುಟ್ತಾ.

ಆಮೇಲ್ ನೋಡುದ್ರೆ ವಿಕೆಟ್ ಬೀಳ್ತಾನೆ ಇಲ್ಲ. ದೇವ್ರ್ಗು ನೋಡಿ ನೋಡಿ ಸಾಕಾಗಿ, ತಗಳಪ್ಪ ಶಮಿ ಅಂತ ಜೆನ್ನಿಂಗ್ಸ್ ವಿಕೆಟ್ ಕೊಟ್ಟ. ಆಮೇಲೆ ಡೇವಿಡ್ ಮಲ್ಲಣ್ಣ ಬಂದ್ರು, ಜೊತೆಗೆ ಒಂದ್ ಪಾರಿವಾಳ ನು ಕರ್ಕೊಂಡ್ ಬಂದ್ರು.

ಅಂಪೈಯರ್ ಗಳ ನೋಡುದ್ರೆ ಒಂದೊಂದ್ ಸಲ ಪಾಪ ಅನ್ಸುತ್ತೆ, ನಾಯ್ಗಳು, ಪಕ್ಷಿಗಳು, ಬಟ್ಟೆ ಬಿಚ್ಚಿ ಓಡ್ ಬಾರೋ ಫ್ಯಾನ್ಸ್ ಗಳು, ರೌಡೀ ಗಳ್ ತರ ಜಗಳ ಆಡೋ ಕ್ರಿಕೆಟರ್ಸ್, ಎಲ್ಲರ್‌ನು ಮ್ಯಾನೇಜ್ ಮಾಡ್ಬೇಕು.

ರೂಟ್ ಎಂದಿನಂತೆ 50 ಹೊಡ್ದ. ಅವ್ನು ಗರ್ಭದಲ್ ಇರ್ಬೆಕಾದ್ರೆ ಅವ್ರಮ್ಮಂಗೆ ಸಚಿನ್ 50 ಹೊಡಿಯದ್ ಹೇಂಗೆ ಅಂತ ಹೇಳ್ಕೋಟಿದ್ನಂತೆ. 100 ಹೊಡಿಯದ್ ಹೇಂಗೆ ಹೇಳ್ಕೊಡು ಅಂದ್ರೇ, ಬಾ ಮುಂಬೈ ಒಂದ್ ಪ್ಲೇಟ್ ಪಾವ್ ಭಾಜಿ ಕೊಡ್ಸು ಅಂದ್ನಂತೆ. ನೋ ಅಫೆನ್ಸ್ ದೇವ್ರು.

ಮಲ್ಲಣ್ಣ ಔಟು, ಗ್ಯಾಸ್ ಸ್ಟೋವ್ ಬಂದ. ಸಾರೀ, ಬೇರ್‌ಸ್ಟೋ.

ಇಬ್ರೂ ಚೆನ್ನಾಗ್ ಆಡುದ್ರು. ಹೆಂಗ್ ನೋಡಿದ್ರೂ ವಿಕೆಟ್ ಬೀಳಲ್ಲ ಅನ್ಸ್ತಿತ್ತು. ಇಂಥ ಟೈಮ್ ಅಲ್ಲಿ ನಮ್ ಕ್ಯಾಪ್ಟನ್, ಬೌಲರ್ಸ್ ವಿಕೆಟ್ ಬೀಳಸದೆ ಇದ್ರೇನು, ನಾನ್ ರನ್ ಔಟ್ ಮಾಡ್ತೀನಿ ಅಂತ ರೂಟ್ ನಾ ರನ್ ಔಟ್ ಮಾಡಿ, ಮೈಕ್ ಡ್ರಾಪ್ ಫಕ್ ಆಫ್ ಅಂತ ಬೀಳ್ಕೊಡುಗೆ ಕೊಟ್ಟ.

ಆಮೇಲ್ ಬಂದವ್ರೆಲ್ಲ ಹೆಂಗ್ ಆಡುದ್ರು ಅಂದ್ರೇ ನಮ್ ಬೌಲಿಂಗ್ ಮೇಲೆ ನಮಗೆ ಎಕ್ಸ್‌ಟ್ರಾ ಕಾನ್ಫಿಡೆನ್ಸ್ ಬಂದ್ಬಿಡ್ತು. ಆಲ್ ಔಟ್ ಆಗ್ತಾರೆ ಅನ್ಕೊಂಡ್ರೆ, ಗವರ್ನಮೆಂಟ್ ಆಫಿಸರ್ಸ್ ತರ ನಾಳೆ ಬನ್ನಿ ಅಂದ್ರು.

ಎರ್ಡ್ನೇ ದಿನ ನಾನು ಊಟ ಮಾಡ್ತ ನೋಡ್ತಾ ಒಂದ್ ತುತ್ ಬಾಯ್ಗ್ ಹಾಕೊ ಅಷ್ಟ್ರಲ್ಲಿ ಆಲ್ ಔಟ್. ಆ ಶೋಕಿ ಗೆ ಇವ್ರು ಆಡಾಕ್ ಬಂದಿದ್ದ? ನಾನ್ ಆಗಿದ್ರೆ ಕೊನೆ ವಿಕೆಟ್ ಏನ್ ಬೆಟ್ಟ ಕಿತ್ ದಬಾಕ್ತನಾ, ತಗೋಳ್‌ರಲೇ, ನಾವ್ ಡಿಕ್ಲೇರ್ ಅಂತಿದ್ದೆ.

ನಮ್ಮಾವ್ರ್ ಬ್ಯಾಟಿಂಗ್ ಶುರು. ಧವನ್ ವಿಜಯ್ 50 ರನ್ ಪಾರ್ಟ್ನರ್‌ಶಿಪ್ ಆಗ್ತಿದಾಂಗೆ ನಂದು ಹಗಲುಗನಸು ಶುರು. ಪಕ್ಕ ಲೀಡ್ ನಮ್ದೇ. 400 ಹೊಡಿತೀವಿ ಅಂತ.

ಉಡ್ದಾರ ಹಾಕೋಳ್ದೇ ಹೇಂಗೆ ಪಂಚೆ ಉದ್ರೋಗುತ್ತೋ ಹಾಂಗೆ 2 ವಿಕೆಟ್ ಬಿದ್ಮೆಲೇನೆ ನಾನ್ ಕನ್ಸಿಂದ ಎದ್ದಿದ್ದು. ಈ ಸ್ಯಾಮ್ ಕುರನ್ ಗೆ ಇನ್ನೂ ಗಂಟಲ್ ಹೊಡ್ದಿಲ್ಲ, ಮೀಸೆ ಬಂದಿಲ್ಲ, ನೋಡುದ್ರೆ 3 ವಿಕೆಟ್ ತಗೊಂಡು ನಮ್ ಬೀ ಬೀ ಗ್ ಬಾರೋ ಹಾಗೆ ಮಾಡ್ದ.

ಕೊಹ್ಲಿ ಇನ್ನ 2014 ಮೂಡ್ ಅಲ್ಲೇ ಇದ್ದು ಸ್ಲಿಪ್ ಗೆ ಕ್ಯಾಚ್ ಬೇರೆ ಕೊಟ್ಟಾಗ ಥೂ ಯಾವನ್ ನೋಡ್ತಾನೆ ಗುರು ಇದ್ನ ಅನ್ಕೊಂಡೆ. ಆದ್ರೆ ನಮ್ ಮಲ್ಲಣ್ಣ, ಈ ಟೆಸ್ಟ್ ಮ್ಯಾಚ್ ಇಷ್ಟ್ ಸುಲಭವಾಗಿ ಕೊನೆ ಆಗ್ಬಿಟ್ರೆ ಮಜಾ ಇರಲ್ಲ ಅನ್ಬಿಟ್ಟು, ಎಸ್ ನಾರಾಯಣ ಫಿಲ್ಮ್ ತರ ಡ್ರಾಮ ಬೇಕು ಅಂತ ಬಂದಿದೆಲ್ಲ ಕೈ ಚೆಲ್ದ.

ಕೊಹ್ಲಿ ನೀ ಬಿಡದ್ ಹೆಚ್ಚ ನಾನ್ ಕೊಡಾದ್ ಹೆಚ್ಚ ಅಂತ ರೂಬ್ರೂಬ್ರೂಬ್ದ. ಒಂದ್ ಕಡೆ ವಿಕೆಟ್ಸ್ ಬೀಳ್ತಿವೆ ಆದ್ರೆ ಕೊಡ್ಲಿ ಉಡದಾರ, ಪಂಚೆ, ಎರ್ಡು ಟೈಟು!

ಯಾರ್ ಬೋಲಿಂಗ್ ಮಾಡುದ್ರು ಒಂದೇ ಟೆಕ್ನೀಕ್. 5 ಬಾಲ್ ಕೊಹ್ಲಿ ಆಡೋದು, ಕೊನೆ ಬಾಲ್ ಸಿಂಗಲ್. ಆ ಕ್ಷಣದಲ್ಲಿ ರೂಟ್ ಗೆ ನೆಂಪಾಯ್ತು, ಅಯ್ಯೋ, ನಮ್ ಟೀಮ್ ಅಲ್ಲಿ ರಶೀದ್ ಇದಾನೆ ಅಲ್ವಾ, ಅವ್ನ್ಗೂ ಬೋಲಿಂಗ್ ಬರುತ್ತೆ ಅಲ್ವಾ, ಅವ್ನು ವಿರಾಟ್ ಕೊಹ್ಲಿ ನಾ ಔಟ್ ಮಾಡಿದ ಅಲ್ವಾ ಅಂತ.

ರಶೀದ್ ಏನು ಮ್ಯಾಜಿಕ್ ಮಾಡ್ಲಿಲ್ಲ, ವಿರಾಟ್ ಎ ಬ್ಯಾಟ್ ಬೀಸಿ ವಿಕೆಟ್ ಒಪ್ಪುಸ್‌ದ. ಅಂತೂ, ನಮ್ಮ ಡೇವಿಡ್ ಮಲ್ಲಣ್ಣ ಡೈರೆಕ್ಟ್ ಮಾಡಿದ್ ನಾಟ್ಕ ಮುಗೀತು.

ಇನ್ನ 15 ನಿಂಷ ಇದೆ, ಯಾಕ್ ವೇಸ್ಟ್ ಮಾಡದು ಅನ್ಬಿಟ್ಟು ಬನ್ನಿ ಇಂಗ್ಲೆಂಡ್ ಬ್ಯಾಟಿಂಗ್ ಆಡಿ ಅಂದ್ರೇ ಅವ್ರು ಬಂದೆ ಬುಡದ?!. ಇಷ್ಟ್ರಲ್ಲಿ ಕೊಹ್ಲಿ ಗೆ ಏನು ಐಡಿಯಾ ಹೊಳಿಲ್ಲಿಲ್ಲ, ಅದಿಕ್ಕೆ ಫರ್ಸ್ಟ್ ಇನ್ನಿಂಗ್ಸ್ ದೆ ಸ್ಟ್ರ್ಯಾಟಜೀ ಕಾಪೀ ಪೇಸ್ಟ್. ಕುಕ್ ಗೆ ಬ್ಯಾಕ್ ಫುಟ್ ಹೋಗ್ಲಾ, ಫ್ರಂಟ್ ಫುಟ್ ಆಡ್ಲ, ಸ್ವೀಪ್ ಮಾಡ್ಲಾ, ಏನು ಗೊತ್ತಾಗ್ದೇ ಪುನಾ ಅಶ್ವಿನ್ ಗೆ ಬಲಿ ಪಶು. ಅಲ್ಲಿಗೆ ಎರಡನೇ ದಿನದ ಅಂತ್ಯ.

ಇಂಗ್ಲೆಂಡ್ ಹತ್ರ ಎಷ್ಟ್ ಲೀಡ್ ಇತ್ತಪ್ಪ ಅಂದ್ರೇ ಒಂದ್ ಲಂಗೋಟಿ ಅಷ್ಟು, ಮಾನ ಮುಚ್ಚೋ ಅಷ್ಟು ಆದ್ರೆ ಅದ್ನೇ ನಂಬ್ಕೊಂಡ್ರೆ ಆಗಲ್ಲ. ಅದಿಕ್ಕೆ 3 ನೇ ದಿನ ಒಳ್ಳೆ ಲೀಡ್ ಕೊಟ್ಟು ಈ ಮ್ಯಾಚ್ ಗೆಲ್ಲಣ ಅಂತ ಬಂದ್ರು.

ಆದ್ರೆ ನಮ್ ಇಶಾಂತ್ ಶರ್ಮ ಯಾವ ಘಲ್ಗೆ ಲಿ ಬನಶಂಕರಿ ಲಿ ಹೇರ್ ಕಟ್ ಮಾಡ್‌ಸ್‌ಕೊಂಡ್ ಬಂದನೋ, ಅವ್ನ್ಗೆ ಬನಶಂಕರಿ ತಾಯಿ ಕೃಪೆ ಒಲಿತು. ಕಬ್ಬಿನ ಗದ್ದೆ ಲಿ ಆನೆ ನುಗ್ದಂಗೆ ನುಗ್ಗಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಗಳನ್ನ ತುಳಿದು ಹಾಕ್‌ಬುಟ್ಟಾ.

ಇಂಗ್ಲೆಂಡ್ 87/7. ನನಗೆ ನಂಬಾಕ್ ಆಗ್ತಿಲ್ಲ ಏನ್ ನೋಡ್ತಿದೀನಿ ಅಂತ.

ಆವಾಗ ಬಂತು ನೋಡಿ ಕುರ. ಈ ಕುರನ್, ಸೇಮ್ ಕುರ ತರ ನೇ. ಅನ್ಕೊಂಡ್ ಜಾಗ್ದಲ್ಲಿ, ಅನ್ಕೊಂಡ್ ಟೈಮ್ ಅಲ್ ಬರಲ್ಲ. ಬರೋದೆಲ್ಲ ಬೇಡದೇ ಇರೋ ಜಾಗ್ದಲ್ಲಿ, ಬೇಡದೇ‌ ಇರೋ ಟೈಮ್ ಅಲ್ಲಿ. ಎಲ್ಲ ಅಂಡ್ ಮುಚ್ಕೊಂಡು ಪೆವಿಲಿಯನ್ ಕಡೆ ಮಾರ್ಚ್ ಮಾಡ್ತಿದ್ರೆ, ಈ ಕುರನ್, ಗಲ್ಲಿ ಕ್ರಿಕೆಟರ್ ತರ, ಮನ್ಸೀಗ್ ಬಂದಂಗೆ ಬೀಸಿ ಲೀಡ್ 194 ತಲ್ಪೋ ತರ ಮಾಡ್ದ.

194 ಟಿ20 ಅಲ್ ಆಗಿದ್ರೆ, 15 ಓವರ್ ಗೆ ಹೊಡೀತಾರೆ ನಮ್ ಇಂಡಿಯಾ ಅವ್ರು. ವನ್ ಡೇ ಆದ್ರೆ 25 ಓವರ್ ಗೆ. ಆದ್ರೆ ಟೆಸ್ಟ್ ಅಂದ್ರೇ ಅವ್ರ್ಗೇನು ಆಗಲ್ಲ ಸ್ವಾಮಿ, ಆ ಫಾರ್ಮ್ಯಾಟ್ ಎ ಹಾಂಗೆ.

ಟಾರ್ ರೋಡ್ ಅಲ್ಲಿ ಎತ್ತಿಂಗಾಡಿ ಹೋಗಕ್ಕಾಗಲ್ಲ, ಹೊಲ ಗದ್ದೆಗೆ ಲ್ಯಾಮ್‌ಬರ್ಗೀನೀ ತಗೊಂಡ್ ಹೋಗಕ್ಕಾಗಲ್ಲ, ಆದ್ರೆ ನಮ್ಮಾವ್ರ್ ನೋಡಿ, ರಣಜಿ ವರ್ಷ ಪೂರ್ತಿ ಆಡ್ತಾರೆ, ಆದ್ರೆ ಟೀಮ್ ಅಲ್ಲಿ IPL ಪ್ಲೇಯರ್ಸ್. ಈ ಜ಼ುಯ್ಯೋ ಅಂತ ಹೋಗೋ ಫೆರಾರೀ ಐಪಿಎಲ್ ಪ್ಲೇಯರ್ಸ್ ಗದ್ದೇಲಿ ಏನ್ ಮಾಡ್ತಾರೆ ಪಾಪ.

ಕ್ರೀಸ್ ಗೆ ಬರೋದು, ತಾಕ್ಸೋದು, ಹೋಗೋದು. ತಾಕ್ಸು ಹೋಗು. ಹೀಂಗೆ ಮಾಡಿ ವಿರಾಟ್ ಕೊಹ್ಲಿ ಒಂದ್ ಕಡೆ ಇಂದ ಒಲ್ಗ್ ಒಳ್ಗೆ ಎಲ್ಲ ಸಂಸ್ಕೃತ ಪದಗಳಲ್ಲಿ ಬೈತಾ ಇದ್ರೆ, 5 ವಿಕೆಟ್, 5 ಪಚ್ ಬಾಳೆ ತರ ಬಿದ್ದೋದ್ರು.

ದಿನ 4, ಅವ್ರ್ಗೆ ಗೆಲ್ಲೋಕೆ 5 ವಿಕೆಟ್, ನಮಗೆ 84 ರನ್ ಬೇಕು. ಫುಲ್ ಟೆನ್ಶನ್. ತಕ್ಕಡಿ ಒಳ್ಳೆ ಬ್ಯಾಲೆನ್ಸ್. ಆದ್ರೆ ನಮ್ ಕಡೆ ವಿರಾಟ್ 10kg ಇದ್ದ, ಮಿಕ್ದವ್ರೆಲ್ಲ 100gm. ಕಾರ್ತಿಕ್ ವಿರಾಟ್ ಗೆ ಸನ್ನಿಧಿ ತರ ಸಾಥ್ ಕೊಡ್ತಾನೆ ಅಂದ್ರೇ ಮುಗುಳುನಗೆ ಹೀರೋಯಿನ್ಸ್ ತರ ಲಾಸ್ಟ್ ಮೊಮೆಂಟ್ ಅಲ್ ಕೈ ಕೊಟ್ಟ.

ಪಾಂಡ್ಯ ಸೊಲ್ಪ ಬಿಸಿ ದೋಸೆ ತವ ಮೇಲೆ ನೀರ್ ಹಾಕ್ದಾಂಗೆ ಸೊಲ್ಪ ಚುರ್ ಚುರ್ ಅಂತ ಸೌಂಡ್ ಮಾಡ್ದ.

ಎಲ್ಲ ವರ್ಕ್ ಔಟ್ ಆಗೋ ತರ ನೇ ಕಾಣ್ತಿತ್ತು. ಆದ್ರೆ ಬಂದ ಬೆನ್ ಸ್ಟೋಕ್ಸ್. ನೋಡಿ, ನಮ್ ತಪ್ಪ್ ಏನ್ ಅಂದ್ರೇ, ಈ ಆಂಡರ್ಸನ್, ಬ್ರಾಡ್ ನಮಗೆ ತೊಂದ್ರೆ ಆಗ್ತಾರೆ ಅನ್ಕೊಂಡ್ವಿ, ನೋಡಿದ್ರೆ ಕುರ ಮತ್ತೆ ಈ ಖೈದಿ ನಂಬರ್ ವನ್ ಸ್ಟೋಕ್ಸ್ ಡೇಂಜರ್ ಆಗ್ಬಿಟ್ರು. ಕೊಹ್ಲಿ LBW ಆದಾಗ ಯಾವ ಹೋಪ್ಸ್ ಕೂಡ ಉಳ್ಕೊಂಡಿರ್ಲಿಲ್ಲ.

ಗೆಲುವಿಗೆ ತುಂಬಾ ಹತ್ರ ಬಂದ್ವು ಸೋತ್ವಿ.
ಇದೇನು ನಮಗೆ ಹೊಸದಲ್ಲ. ನಾನ್ ಬೇರೆ RCb ಫ್ಯಾನ್, ಈತರ ನೋವು ತುಂಬಾ ಸಲ ಆಗಿದೆ. ಆದ್ರೂ ಸೈಕಲ್ ಗ್ಯಾಪ್ ಅಲ್ಲಿ ಎರ್ಡ್ ಹನಿ ಕಣ್ಣೀರ್ ಬಂತು. ಕೆನ್ನೆ ತನಕ ಬಾರೋ ಅಷ್ಟ್ರಲ್ಲಿ ಓಣಗೊಗಿತ್ತು. ಇನ್ನ 4 ಟೆಸ್ಟ್ ಮ್ಯಾಚ್ ಇದೆ, ಗೆದ್ದೇ ಗೆಲ್ಲುವೆವು ಒಂದು ದಿನ ಅನ್ಕೊಂಡು, ರಗ್ಗ್ ಹೊಸ್ಕೊಂಡು ಮಲ್ಕೊಂಡೆ..

3 ಗಂಟೆ ಆದ್ಮೇಲೆ ಎಚ್ರ ಆಯ್ತು. ಸೋಲು ಇನ್ನ ಕಾಡ್ತಾ ಇತ್ತು. ಹೇಳ್ಕೊಳೋಕೆ ಕ್ರಿಕೆಟ್ ಆಸಕ್ತರು ಯಾರು ಇರ್ಲಿಲ್ಲ. ಅದಿಕ್ಕೆ ಆಗೀದ್ ಆಗ್ಲಿ ಅಂತ, ಈ ನನ್ನ ಚಿಕ್ಕ ಬ್ಲಾಗ್ ಶುರು ಮಾಡ್ದೆ. ಓದಿ ಖುಷಿ ಆಗಿದ್ರೆ, ಲೈಕ್ ಮಾಡಿ, ಶೇರ್ ಮಾಡಿ, ನಿಮ್ಮ ಕಾಮೆಂಟ್ಸ್ ಕೊಡಿ. ಇಂಡಿಯಾ ಟೀಮ್ ಗೆ ಹಾಗೂ ನನಗೆ ನಿಮ್ಮ ಪ್ರೋತ್ಸಾಹ ಬೇಕು.

ಎರಡನೇ ಮ್ಯಾಚ್ ದು ಕೂಡ ಸಂಪೂರ್ಣ ವಿಶ್ಲೇಷಣೆ ಕೊಡ್ತೀನಿ. ನಿಮ್ಮಲ್ಲೆರ ಆಶೀರ್ವ್ದಾದ ಇರ್ಲಿ.
ಜೈ ಹಿಂದ್. ಜೈ ಕರ್ನಾಟಕ ಮಾತೆ.

2 thoughts on “ಕೊಹ್ಲಿ ಹಾಗು‌ ಕುರ.(ನ್)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s